ವೇಣುಗೋಪಾಲ ಸೊರಬ ಇವರು ೧೯೩೭ ರಲ್ಲಿ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದರು. ಇವರ ತಾಯಿ ಸೀತಮ್ಮ ; ತಂದೆ ರಾಮರಾವ್. ಇವರು ಕನಕಪುರ ರೂರಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಇವರ ಕೆಲವು ಕವನ ಸಂಕಲನಗಳು: ಮುಸುಕು-ನಸುಕು ಜೀವ-ಜೀವಂತ ಗರಿ ಮುರಿದ ಹಕ್ಕಿಗಳು ೧೯೭೪ರಲ್ಲಿ “ಗರಿ ಮುರಿದ ಹಕ್ಕಿಗಳು” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.